ಪ್ರವೇಶಾತಿ ಪ್ರಕ್ರಿಯೆ ಮತ್ತು ಶುಲ್ಕ
- ೮ನೇ ತರಗತಿಗೆ ಪ್ರವೇಶ ಬಯಸುವ ವಿದ್ಯಾರ್ಥಿಯು ಭರ್ತಿಮಾಡಿದ ಅರ್ಜಿಯೊಂದಿಗೆ ಏಳನೇ ತರಗತಿಯ ಅಸಲಿ ಅಂಕಪಟ್ಟಿ, ಅಸಲಿ ವರ್ಗಾವಣೆ ಪತ್ರ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಗಳನ್ನು ಪರಿಶೀಲನೆಗೆ ಪ್ರವೇಶ ಪಡೇಯುವಾಗ ಕಡ್ಡಾಯವಾಗಿ ಒದಗಿಸಬೇಕು. ಬೆಂಗಳೂರು ನಗರ ಹೊರತಾದ ವಿದ್ಯಾರ್ಥಿಯು DDPI ರಿಂದ ದೃಢೀಕರಿಸಲ್ಪಟ್ಟ ವರ್ಗಾವಣೆ ಪತ್ರವನ್ನು ಪ್ರವೇಶಾತಿ ವೇಳೆ ಒದಗಿಸಬೇಕು.
- ಪ್ರೌಢಶಾಲೆಗೆ ಪ್ರವೇಶಾತಿ ಬಯಸುವ ಸ್ಥಳೀಯ ಅಥವಾ ಹೊರಗಿನ ಯಾವುದೇ ವಿದ್ಯಾರ್ಥಿಯು DDPI ರಿಂದ ದೃಢೀಕರಿಸಲ್ಪಟ್ಟ ವರ್ಗಾವಣೆ ಪತ್ರ ಮತ್ತು ಸ್ಥಳೀಯ ಅಥವಾ ಅಂತರ್ ಜಿಲ್ಲಾ ವರ್ಗಾವಣೆಗೆ ಅನುಮತಿ ಪತ್ರ ಒದಗಿಸಬೇಕು.
- ಶೇಷಾದ್ರಿಪುರಂ ಸ್ತ್ರೀ ಸಮಾಜ ಮತ್ತು ಶೇಷಾದ್ರಿಪುರಂ ಇಂಗ್ಲೀಷ್ ಪ್ರೌಢಶಾಲೆ, ಕುಮಾರಪಾರ್ಕ್ ಶಾಲೆಗಳ ೭ನೇ ತರಗತಿಯಲ್ಲಿ ಶೇ. 50% ಕ್ಕಿಂತ ಕಡಿಮೆ ಪಡೆಯದ ವಿದ್ಯಾರ್ಥಿಗಳು ಶೇಷಾದ್ರಪುರಂ ಪ್ರೌಢಶಾಲೆ, ಬೆಂಗಳೂರು-20 ಶಾಲೆಯಲ್ಲಿ ಪ್ರವೇಶಾತಿ ಪಡೆಯಲು ಅರ್ಹರಾಗಿರುತ್ತಾರೆ.
- ಪ್ರೌಢಶಲೆಗೆ ಪ್ರವೇಶಾತಿ ಪಡೆಯಲು ಬಯಸುವ ಹೊರರಾಜ್ಯದ ವಿದ್ಯಾರ್ಥಿಗಳು ಆ ರಾಜ್ಯದ ಸಂಬಂಧಿಸಿದ ಶೈಕ್ಷಣಿಕ ಪ್ರಾಧಿಕಾರದ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ವರ್ಗಾವಣೆ ಪತ್ರ ಮತ್ತು ಅನುಮತಿ ಪತ್ರವನ್ನು ಒದಗಿಸಬೇಕು. ಒಂದು ವೇಳೆ ಪ್ರವೇಶಾತಿ ಸ್ಥಾನಗಳು ಖಾಲಿ ಇದ್ದಲ್ಲಿ ಶಿಕ್ಷಣ ಇಲಾಖೆಯ ಮಾರ್ಗದರ್ಶನದಂತೆ ಅನುಪಾತಕ್ಕೆ ತಕ್ಕಂತೆ ವಿದ್ಯಾರ್ಥಿಗೆ ಪ್ರವೇಶಾತಿ ಕಲ್ಪಿಸಲಾಗುತ್ತದೆ.