ಫೌಂಡೇಶನಲ್(ಅಡಿಪಾಯದ) ಹಂತ - ಪೂರ್ವ ಪ್ರಾಥಮಿಕದಿಂದ ೨ನೇ ತರಗತಿ
ಫೌಂಡೇಶನಲ್ ಹಂತ ಐದು ವರ್ಷಗಳ ಶಿಕ್ಷಣವಾಗಿರುತ್ತದೆ. ಇದು ೩ ರಿಂದ ೮ ವಯಸ್ಸಿನ ಎಲ್ಲಾ ಮಕ್ಕಳಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಸಂಯೋಜಿಸುತ್ತದೆ. ಈ ಹಂತಕ್ಕಾಗಿ ಪಠ್ಯಕ್ರಮದ ಸಂಘಟನೆ, ಶಿಕ್ಷಣ ಶಾಸ್ತ್ರ, ಸಮಯ ಮತ್ತು ವಿಷಯ ಸಂಘಟನೆ ಮತ್ತು ಮಗುವಿನ ಒಟ್ಟಾರೆ ಅನುಭವದ ಪರಿಕಲ್ಪನಾ, ಕಾರ್ಯಚರಣೆ ಮತ್ತು ವಹಿವಾಟಿನ ವಿಧಾನಗಳ ಮಧ್ಯಭಾಗದಲ್ಲಿ ಪ್ಲೇ ಅನ್ನು ಬಳಸುತ್ತದೆ. ನಲಿ-ಕಲಿಯ ಮೂಲಕ ಓದುವಿಕೆ, ಬರವಣಿಗೆ, ಸಂವಹನ, ಕಲೆ, ಭಾಷೆ, ವಿಜ್ಞಾನ ಮತ್ತು ಗಣಿತದಂತಹ ವಿಷಯಗಳೀಗೆ ಭದ್ರವಾದ ಅಡಿಪಾಯ ಒದಗಿಸುತ್ತದೆ.
ಪೂರ್ವ ಪ್ರಾಥಮಿಕ ಹಂತ ಮಕ್ಕಳ ಮಿದುಳಿನ ವಿಕಾಸಕ್ಕೆ ಉತ್ತೇಜಿಸುತ್ತದೆ. ಕಥೆ, ಬೊಂಬೆಗಳು, ಚಟುವಟಿಕೆಗಳು, ದೈಹಿಕ ವ್ಯಾಯಾಮಗಳು ಅವರಲ್ಲಿ ಪ್ರಶ್ನೆಸುವ, ಗಮನಿಸುವ, ಅನುಕರಿಸುವ ಮತ್ತು ಅನ್ವೇಷಿಸುವ ಗುಣಗಳನ್ನು ಉದ್ದೀಪನಗೊಳಿಸುತ್ತದೆ.
ಕೌಶಲ್ಯಾಧಾರಿತ ಚಟುವಟಿಕೆಗಳು:
- ತರಕಾರಿ ಮುದ್ರಣ
- ದಾರದಿಂದ ಮಾಡುವ ವಿನ್ಯಾಸಗಳು
- ಕವನ ವಾಚನ
- ಕಾಗದದ ಕರಕುಶಲ
- ಎಲೆ ಮುದ್ರಣ
- ಬಣ್ಣಗಳ ವಾರ
- ಭಾಷಣ
- ಕ್ಲೇ ಮಾಡೆಲಿಂಗ್
- ಅಬಾಕಸ್ ಮೂಲಕ ಗಣಿತ
ಈ ಎಲ್ಲಾ ಕಲಿಕೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವ ಸಲುವಾಗಿ ವಿಶಾಲವಾದ ಕೊಠಡಿಗಳು ಮತ್ತು ದೃಶ್ಯ-ಧ್ವನಿ ಸಾಧ್ನಗಳು, ಸ್ಮಾರ್ಟ್ ಬೋರ್ಡ್ ಗಳನ್ನು ಒದಗಿಸಲಾಗಿದೆ.
ಮೊಂಟಸ್ಸರಿ ಮತ್ತು ರೆಜ್ಜಿಯೋ ಎಮಿಲಿಯಾ ಅನುಸಂಧಾನದ ಪ್ರಕಾರ, ಮಗು ತನ್ನ ಇಂದ್ರಿಯಗಳ ಮೂಲಕ ಅನ್ವೇಷಣೆ ಮಾಡಿ ಕೆಲಿಯಲು ಪ್ರಾರಂಭಿಸುತ್ತದೆ. ಮೊಂಟಸ್ಸರಿ ವಿಧಾನದಲ್ಲಿ ಮಗುವಿಗೆ ತನಗೆ ಬೇಕಾದ ಚಟುವಟಿಕೆಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನೀಡಲಾಗುತ್ತದೆ ಮತ್ತು ಮಗು ತನಗೆ ಬೇಕಾದ ಹಾಗೆ ಓಡಾಡುತ್ತ ಚಟುವಟಿಕೆ ಮಾಡಲು ಆಯ್ಕೆ ಇರುತ್ತದೆ.
ಮಧ್ಯಮ ಹಂತ - ೬ ರಿಂದ ೮ನೇ ತರಗತಿ
ಮಧ್ಯಮ ಹಂತವು ಮೂರು ವರ್ಷಗಳ ಶಿಕ್ಷಣ ಒಳಗೊಂಡಿರುತ್ತದೆ. ಈ ಹಂತವು ಪಠ್ಯಕ್ರಮ ಆಧಾರಿತ ಶಿಕ್ಷಣ ಶಾಸ್ತ್ರವನ್ನು ಅಲ್ಲದೇ ವಿವಿಧ ವಿಷಯಗಳ ಕಲಿಯುವಿಕೆಯನ್ನು ಪರಿಚಯಿಸಿ ಮತ್ತು ಅಮೂರ್ತ ಪರಿಕಲ್ಪನೆಗಳ ಚರ್ಚಿಸುವಿಕೆಗೆ ಪ್ರೇರೇಪಿಸುತ್ತದೆ. ವಿಜ್ಞಾನ, ಗಣಿತ ಶಾಸ್ತ್ರ, ಕಲೆ, ಸಮಾಜ ವಿಜ್ಞಾನ ಮತ್ತು ಮಾನವ ಶಾಸ್ತ್ರದಂತ ವಿಷಯಗಳ ಬಗೆಗಿನ ಅಮೂರ್ತ ಪರಿಕಲ್ಪನೆಯನ್ನು ಉದ್ದೀಪನಗೊಳಿಸುತ್ತದೆ.
ಕಲಿಯುವಿಕೆಯ ತಂತ್ರಗಳು
- ಗಣಕಯಂತ್ರ ಕಲಿಯುವಿಕೆ
- LSRW ಕೌಶಲ್ಯ
- ವಿಜ್ಞಾನ ಮಾದರಿಗಳು
- ಬೌದ್ಧಿಕ ಗಣಿತ
- ಗಣಿತ ಚಕ್ರ
ನಾವು ಮಕ್ಕಳನ್ನು ಒಂದು ಶೈಕ್ಷಣಿಕ ವರ್ಷದಲ್ಲಿ ಎರಡು ರೂಪನಾತ್ಮಕ ಮತ್ತು ಎರಡು ಸಂಕಲನಾತ್ಮಕ ಮೌಲ್ಯಮಾಪನಗಳಿಂದ ಅಳೆಯುತ್ತೇವೆ. ಒಂದು ಶೈಕ್ಷಣಿಕ ವರ್ಷವು ಎರಡು ಅವಧಿಗಳನ್ನು ಒಳಗೊಂಡಿರುತ್ತದೆ. CCE ವಿಧಾನದಂತೆ ಯೋಜನಾ ಕಾರ್ಯಗಳು ಮತ್ತು ಸೃಜನಾತ್ಮಕ ಬರವಣಿಗೆಗೆ ಪ್ರೇರೇಪಿಸುವ ಅಸೈನ್ ಮೆಂಟ್ ಗಳು ಕೂಡ ಮೌಲ್ಯ ಮಾಪನದ ಭಾಗಗಳಾಗಿರುತ್ತವೆ.
ಪೂರ್ವ ಸಿದ್ಧತಾ ಹಂತ - ೩ ರಿಂದ ೫ನೇ ತರಗತಿ
ಪೂರ್ವ ಸಿದ್ಧತಾ ಹಂತವೂ ಮೂರು ವರ್ಷಗಳ ಶಿಕ್ಷಣವನ್ನು ಒಳಗೊಂಡಿರುತ್ತದೆ. ಈ ಹಂತವು ಫೌಂಡೇಶನಲ್ ಹಂತದ ಮೂಲ ಆಶಯಗಳ ಮೇಲೆ ಅವಲಂಬನೆಯಾಗಿರುತ್ತದೆ.
NEP-2020 ಪ್ರಕಾರ ೨, ೪, ೫ ನೇ ತರಗತಿಯ ಪಠ್ಯವು ಜ್ಞಾನ, ಕೌಶಲ್ಯ ಮತ್ತು ವರ್ತನೆಗಳ ಸಮ್ಮಿಲನವಾಗಿರುತ್ತದೆ. ಈ ಹಂತದ ಪಠ್ಯವು ವಯಸ್ಸು ಆಧಾರಿತ ಜ್ಞಾನ, ಅಡ್ಡ ಕೌಶಲ್ಯಗಳಾದ ಸಂವಹನ, ಆತ್ಮವಿಶ್ವಾಸ, ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ವಿದ್ಯಾರ್ಥಿ ನಾಯಕತ್ವ, ಭಾವನಾತ್ಮಕ ಮತ್ತು ಸಾಮಾಜಿಕ ಯೋಗಕ್ಷೇಮ ಮುಂತಾದವುಗಳ ವಿಕಾಸಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅಂತರಶಿಸ್ತೀಯ ಸಂಯೋಜಿತ ಯೋಜನೆಗಳು ವಿಶಿಷ್ಟವಾದ ಅರಿವು ಮತ್ತು ಮೆಟಾಕಾಗ್ನಿಟಿವ್ ಕಯ್ಶಲ್ಯಗಳನ್ನು ಅಭಿವೃದ್ಧಿ ಪಡಿಸಿ ಮಗುಅವನ್ನು ಅಸಾಧಾರಣ ವ್ಯಕ್ತಿಯನ್ನಾಗಿ ಮಾಡುತ್ತವೆ. ಅನುಭವಾಧಾರಿತ ಕಲಿಕೆ, ಯೋಜನೆ ಮೂಲಕ ಕಲಿಕೆ ಮತ್ತು ವಿಕಾಸದತ್ತ ಬೆಳವಣಿಗೆ ಎಂಬ ಮನೋಭಾವ ಈ ಹಂತದ ಪ್ರಮುಖ ಅಂಶಗಳಾಗಿರುತ್ತವೆ.
ಅಂತರ ಶಿಸ್ತೀಯ ಚಟುವಟಿಕೆಗಳು:
- ಸಾಹಿತ್ಯಿಕೆ ಚಟುವಟಿಕೆಗಳು
- ಮೋಜಿನ ಗಣಿತದ ಆಟಗಳು
- ಓದುವ ಚಟುವಟಿಕೆ
- ಒಗಟುಗಳು
- ಬರವಣೆಗೆ
- ಸಸ್ಯಗಳ ಬೆಳವಣಿಗೆ ಬಗ್ಗೆ ತನಿಖೆ
ಶಿಸ್ತು ಮತ್ತು ನಡುವಳಿಕೆ
- ಪ್ರತಿಯೊಂದು ಅವಧಿಯ ಪರೀಕ್ಷೆ ಮತ್ತು ಕಿರು ಪರೀಕ್ಷೆಗಳಿಗೆ ಪ್ರತಿ ವಿದ್ಯಾರ್ಥಿಯ ಹಾಜರಾತಿ ಕಡ್ಡಾಯವಾಗಿರುತ್ತದೆ. ಈ ಪರೀಕ್ಷೆಗಳ ಅಂಕಗಳು ಮುಂದಿನ ತರಗತಿಯ ಪ್ರವೇಶಕ್ಕೆ ಮಾನದಂಡಗಳಾಗಿರುತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ.
- ಪ್ರತಿ ತರಗತಿಯ ವಿದ್ಯಾರ್ಥಿಯ ಹಾಜರಾತಿ ಕಡ್ಡಾಯವಾಗಿರುತ್ತದೆ. ಯಾವುದೇ ಅನಿರೀಕ್ಷಿತ, ತುರ್ತು ಸಂದರ್ಭಗಳಲ್ಲಿ ತರಗತಿಗಳಿಗೆ ಹಾಜರಾಗಲು ಆಗದಿದ್ದಲ್ಲಿ ತರಗತಿ ಶಿಕ್ಷಕರು ಅಥವಾ ಪ್ರಾಂಶುಪಾಲರಿಗೆ ಪತ್ರದ ಮೂಲಕ ತಿಳಿಸುವುದು ಕಡ್ಡಾಯ.
- ಅನಾರೋಗ್ಯದ ನಿಮಿತ್ತ ದೀರ್ಘ ರಜೆ ತೆಗೆದುಕೊಂಡಲ್ಲಿ ರಜೆ ಪತ್ರದೊಂದಿಗೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.
- ಹಾಜರಾತಿ, ನಡುವಳಿಕೆ ಮತ್ತು ಶಿಸ್ತು ತೃಪ್ತಿ ತರದಿದ್ದಲ್ಲಿ ವಿದ್ಯಾರ್ಥಿಯ ವಿದ್ಯಾರ್ಥಿವೇತನವನ್ನು ತಡೆಹಿಡಿಯಲಾಗುವುದು.
- ವಿರಾಮ ವೇಳೆಗಳಲ್ಲಿ ಬಿಟ್ಟು ಬೇರೆ ಸಮಯಗಳಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲೇ ಇರತಕ್ಕದ್ದು. ತುರ್ತು ಸಂದರ್ಭಗಳಲ್ಲಿ ತರಗತಿ ಬಿಟ್ಟು ತೆರಳಬೇಕಿದ್ದಲ್ಲಿ, ತರಗತಿಯಲ್ಲಿರುವ ಶಿಕ್ಷಕರು ಅಥವಾ ಪ್ರಾಂಶುಪಾಲರಿಂದ ಅನುಮತಿ ಪಡೆಯತಕ್ಕದ್ದು. ಯಾವುದೇ ವಿದ್ಯಾರ್ಥಿಯನ್ನು ತರಗತಿಯ ಅವಧಿ ಮುಗಿಯುವವರೆಗೂ ಹೊರ ಕಳುಹಿಸುವುದಿಲ್ಲ.
- ಬೆಲ್ ( ಘಂಟೆ) ಬಾರಿಸಿದ ತಕ್ಷಣ ಎಲ್ಲಾ ವಿದ್ಯಾರ್ಥಿಗಳು ಪ್ರಾರ್ಥನಾ ಸಭೆಗೆ ಶಿಸ್ತಾಗಿ ತರಗತಿ ವಾರು ಸಾಲಲ್ಲಿ ಬಂದು ನಿಲ್ಲುವುದು ಮತ್ತು ಸಂಪೂರ್ಣ ನಿಶಬ್ಧವಾಗಿ ಇರತಕ್ಕದ್ದು.
- ವಿದ್ಯಾರ್ಥಿಗಳು ಪ್ರತಿದಿನ ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಹಾಜರಾಗತಕ್ಕದ್ದು. ತಪ್ಪಿದ್ದಲ್ಲಿ ಪ್ರಾಂಶುಪಾಲರಿಂದ ಅನುಮತಿ ಕಡ್ಡಾಯವಾಗಿರುತ್ತದೆ.
- ಪ್ರಾರ್ಥನೆಯ ನಂತರ ವಿದ್ಯಾರ್ಥಿಗಳು ತ್ವರಿತವಾಗಿ ಶಿಸ್ತು ಪಾಲಿಸಿ ತರಗತಿಗಳಿಗೆ ತೊಂದರೆಯಾಗದಂತೆ ವಿದ್ಯಾರ್ಥಿಗಳು ಶಿಸ್ತು ಪಾಲಿಸಬೇಕು.
- ತರಗತಿಯ ನಾಯಕ ಅವನ/ಳ ತರಗತಿಯ ಸ್ವಚ್ಛತೆ, ಶಿಸ್ತು, ಕುರ್ಚಿಗಳು ಮತ್ತು ನಡೆವಳಿಕೆಗೆ ನೇರ ಹೊಣೆಯಾಗಿರುತ್ತಾರೆ. ತರಗತಿಯಲ್ಲಿ ಶಿಕ್ಷಕರು ಇಲ್ಲದಿರುವಾಗ ವಿದ್ಯಾರ್ಥಿಗಳು ನಿಶಬ್ಧವಾಗಿರುವಂತೆ ನೋಡಿಕೊಳ್ಳುವುದು ಅವನ/ಳ ಕರ್ತವ್ಯ.ಸಣ್ಣ ತಪ್ಪುಗಳಾದ ತರಗತಿಗೆ ವಿಳಂಬವಾಗಿ ಆಗಮಿಸುವುದು, ತರಗತಿ ವೇಳೆಯಲ್ಲಿ ಕಾರಿಡಾರಿನಲ್ಲಿ ಓಡಾಟ ಮುಂತಾದವುಗಳನ್ನು ಸಹಿಸಲಾಗುವುದಿಲ್ಲ.
- ಪ್ರತಿ ವಿದ್ಯಾರ್ಥಿಯು ಸ್ವಚ್ಛವಾಗಿ, ಶಿಸ್ತಾಗಿ, ಶಾಲೆಗೆ ಬರಬೇಕು ಎಂದು ನಿರ್ದೇಶಿಸಲಾಗಿದೆ.
- ತರಗತಿಯ ಯಾವುದೇ ಆಸ್ತಿ-ಪಾಸ್ತಿಗೆ ಹಾನಿಯಾದರೂ ಸಂಬಂಧಿಸಿದ ವಿದ್ಯಾರ್ಥಿಯೇ ಹೊಣೆಗಾರರಾಗುತ್ತಾರೆ ಮತ್ತು ಅದರ ಸಂಪೂರ್ಣ ಖರ್ಚನ್ನು ವಹಿಸಬೇಕಾಗುತ್ತದೆ.
- ಶಾಲೆಯ ಹೊರಗಿನ ಯಾವುದೇ ಅಶಿಸ್ತು ಅಥವಾ ಅಪರಾಧಗಳನ್ನು ಶಾಲೆ ಗಮನಿಸುತ್ತದೆ ಮತ್ತು ಗಂಭೀರವಾಗಿ ಪರಿಗಣಿಸುತ್ತದೆ. ಅಪರಾಧದ ಆಧಾರದ ಮೇಲೆ ವಿದ್ಯಾರ್ಥಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.